Sunday, November 27, 2011

ರವೆ ಇಡ್ಲಿ

ಮೀಡಿಯಂ ರವೆ ಎರಡು ಕಪ್
ಉದ್ದಿನ ಬೇಳೆ ಒಂದು ಕಪ್
ಮಾಡುವ ವಿಧಾನ
ಉದ್ದಿನಬೇಳೆಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನಸಿ ನುಣ್ಣಗೆ ರುಬ್ಬಿ.
ರವೆಯನ್ನು ಒಂದು ಡಬ್ಬಿಅಥವ ಪಾತ್ರೆಯಲ್ಲಿ ಹಾಕಿ ಮುಚ್ಚಿ.
ಇದನ್ನು ಒಂದು ನೀರು ಹಾಕಿದ ಕುಕ್ಕರಿನಲ್ಲಿ ಇಟ್ಟು ಆನ್ನ ಮಾಡುವಂತೆ ಐದು ನಿಮಿಷ ಬೇಯಿಸಿ.ರವೆಗೆ ನೀರು ಹಾಕ ಬಾರದು.
ನಂತರ ರವೆಯನ್ನು ತಣ್ಣಗೆ ಆಗಲು ಬಿಡಿ.
ಆರಿದ ರವೆಗೆ ಒಂದು ಅಥವಾ ಒಂದೂವರೆಕಪ್ ನೀರು ಹಾಕಿ ಕಲಸಿ .ಉಪ್ಪಿಟ್ಟಿನಂತೆ ಇದ್ದರೆ ಸಾಕು.ಇದನ್ನು ರುಬ್ಬಿದ ಉದ್ದಿನಬೇಳೆಯೊಂದಿಗೆ ಸೇರಿಸಿ ಮೂರು ಅಥವಾ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎರಡು ನಿಮಿಷ ರುಬ್ಬಿ.ಮಾರನೆಯ ದಿನ ಇಡ್ಲಿ ಪ್ಲೇಟಿನಲ್ಲಿ ಹಾಕಿ ಇಡ್ಲಿ ಮಾಡಿ .ಹತ್ತು ನಿಮಿಷ ಬೇಯಿಸಿದರೆ ಸಾಕು.

ಕಿವಿ ಮಾತು
ರವೆಯನ್ನು ನೀರಿನಲ್ಲಿ ಕಲೆಸಿ ನಂತರ ರುಬ್ಬಿದ ಉದ್ದಿನಬೇಳೆಗೆ ಬೆರಸುವುದರಿಂದ ರವೆ ಗಂಟಾಗುವುದಿಲ್ಲ.
ಇಡ್ಲಿ ತಟ್ಟೆಯ ಎರಡು ಕಡೆಗೂ ಎಣ್ಣೆ ಸವರಿ. ಇದರಿಂದ ಇಡ್ಲಿ ತಟ್ಟೆಯ ಹಿಂಬಾಗಕ್ಕೆ ಇಡ್ಲಿ ಅಂಟುವುದಿಲ್ಲ
ಚಳಿಗಾಲದಲ್ಲಿ ಇಡ್ಲಿ ಹಿಟ್ಟನ್ನು ಎರಡು ಕಪ್ ಬಿಸಿನೀರು ಹಾಕಿದ ಕುಕ್ಕರಿನಲ್ಲಿ ಇಟ್ಟು ವಯಿಟ್ ಹಾಕಿ ಮುಚ್ಚಿದರೆ ಹಿಟ್ಟು ಚೆನ್ನಾಗಿ ಉಬ್ಬುತ್ತದೆ
ಇಡ್ಲಿ ಹಿಟ್ಟನ್ನು ತೊಳಸಬಾರದು ಪ್ರತಿಸಲ ತಳದಿಂದ ಹಿಟ್ಟು ತೆಗದು ಇಡ್ಲಿ ತಟ್ಟೆಗೆ ಹಾಕಬೇಕು
ಕುಕ್ಕರಿಗೆ ವಯಿಟ್ ಹಾಕಬಾರದು ಒಂದು ಬಟ್ಟಲು ಮುಚ್ಚಬೇಕು.
ಈ ಹಿಟ್ಟನ್ನು ಒಂದು ದಿನಕ್ಕಿನ್ಥಲೂ ಹೆಚ್ಚಿಗೆ ಇಡಬಾರದು.ಅಷ್ಟುಹಿಟ್ಟಿನಲ್ಲೂ ಇಡ್ಲಿ ಮಾಡಿ ಫ್ರಿಜ್ಜಿನಲ್ಲಿತ್ತು ಬೇಕಾದಾಗ ಬಿಸಿಮಾಡಿಕೊಂಡು ತಿನ್ನ ಬಹುದು .
ಮಇಕ್ರೊವೆವ್ ನಲ್ಲಿ ಬಿಸಿ ಮಾಡುವಾಗ ಎರಡು ಚಮಚ ನೀರು ಚುಮುಕಿಸಿ ಮುಚ್ಚಿ ಎರಡು ನಿಮಿಷ ಬಿಸಿಮಡಿದರೆ ಸಾಕು .
ಸಕ್ಕರೆ ಕಾಯಿಲೆಯವರಿಗೆ ಇದು ಒಳ್ಳಯ ಆಹಾರ

No comments:

Post a Comment